school activity calander

x

Friday 5 September 2014

Prime minister with his young friends at our school


Nation building should become a national movement and every individual should be associated with it, PM Modi said in his Teacher's Day speech.
Our students are inspired by our Prime minister
At 3:00 pm we made all set up to watch the Prime minister programme. Unfortunately we could not watch the programme through Victers. Suddenly we switch over to Dooradarshan. Today 321 student participated in Onam programme.196 students watched the programme. In the Evenining we concluded the programme with short discussion and national anthem. Discussion was led by Sri: Jayaprakash K, H M,Sri C K Venu, SRG Convener, Sri: Mohammed Sali M K, H S A Urdu, B Usha Kumari, H S A Kannada, Ramakrishna, P D Teacher
Details of speech
Addressing millions of students and teachers across the country, Prime Minister Narendra Modi, in his Teacher’s Day address to the nation, said on Friday that there is need to find out why the value of a teacher has lost its brightness and why students don’t want to be teachers when they grow up.
In a first such address to the nation, the Prime Minister said there is a great demand for good teachers in the world, and India being a young country should be able to produce good quality teachers for the world.
“For me it is a privilege that I am able to speak to those who are the future of the country. Today is Teacher’s Day, but slowly the value of the day is lessening... There must probably be some schools where it is not observed...The day is now just focused on teachers getting awards and being felicitated, it remains that. It is necessary to highlight the value of teachers in society.”
“There is need to give more value to this important tradition, and it needs more discussion why students don’t want to be teachers. The answer to this has to be sought by all...There is a great demand for good teachers in the world, they are not available. India is a young country, why can’t we give the promise that India will provide good teachers to the world. And students should say that yes I will be a teacher.”


ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ಭಾಷಣ
ಕಾರ್ಯಕ್ರಮದ ಪಾಯಿಂಟ್ಸ್‌...
- ದೇಶದ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳೂ ಸಹ ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳಿದರು.

ಪರಿಸರದ ಸಂರಕ್ಷಣೆ ಹೇಗೆ ಮಾಡುವುದು ?
ಮೋದಿ - ಮನುಷ್ಯರು ಪರಿಸರದ ಜೊತೆಗೆ ಸಂಘರ್ಷ ಮಾಡಬಾರದು. ಬದಲಿಗೆ ಪ್ರೀತಿಸಬೇಕು . ಪರಿಸರ ಬದಲಾಗಿಲ್ಲ-ನಾವು ಬದಲಾಗಿದ್ದೇವೆ ಎಂದರು. ವಿ- ನಿಮಗೆ ರಾಜಕೀಯದ ಒತ್ತಡದಲ್ಲಿ ದಣಿವಾಗುವುದಿಲ್ಲವೆ?
ಮೋದಿ - ರಾಜಕೀಯ ವೃತ್ತಿಯಲ್ಲ, ಸೇವಾ ರೂಪದಲ್ಲಿ ಸ್ವೀಕರಿಸಬೇಕು .ದೇಶದ ನೂರ ಇಪ್ಪತ್ತು  ಕೋಟಿ ಜನರು ನನ್ನ ಪರಿವಾರದವರು ಎಂದು ತಿಳಿದರೆ ದಣಿವಾಗುವುದಿಲ್ಲ.
ನಾನು ದೇಶದ ಪ್ರಧಾನಿ ಯಾಗಲು ಹೇಗೆ ಸಾಧ್ಯ ? ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ 2024 ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ನಗುನಗುತ್ತಾ ತುಂಟ ಉತ್ತರ ನೀಡಿದರು.
ನೀವು ನಿಜವಾಗಲೂ ಯಾವ ರೀತಿಯ ವ್ಯಕ್ತಿ ?ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ .. ನಾನು ಯಾವ ರೀತಿಯ ವ್ಯಕ್ತಿಯೆಂದು ನನಗೆ ನಿರ್ಧರಿಸಲು ಸಾಧ್ಯವಾಗಿಲ್ಲ...ನಾನು ಕೆಲಸವನ್ನು ಉತ್ತಮವಾಗಿ  ಮಾಡುವವ ಮತ್ತು ಕೆಲಸ ಮಾಡಿಸುವವ ಮತ್ತು ಸಮಯಕ್ಕೆ ಕೆಲಸ ಮುಗಿಸುವುದು ನನ್ನ ಆಧ್ಯತೆ ಎಂದರು.

- ಸಂವಾದದಲ್ಲಿ ಇನ್ನೋರ್ವ ವಿದ್ಯಾರ್ಥಿ, 'ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರಿಂದ ನಿಮಗೆ ಏನು ಲಾಭ...' ಎಂಬ ತುಂಟ ಪ್ರಶ್ನೆಯನ್ನು ಎಸೆದ. ಇದಕ್ಕೆ ಲಘು ದಾಟಿಯಲ್ಲಿ ಉತ್ತರಿಸಿದ ಪ್ರಧಾನಿಯವರು, ಖಂಡಿತವಾಗಿಯೂ ಇದರಲ್ಲಿ ನನಗೆ ಲಾಭವಿದೆ ಎಂದು ಉತ್ತರಿಸಿದರು. ಬಾಲಮಿತ್ರರೊಂದಿಗೆ ಮಾತನಾಡುವ ಮೂಲಕ ನನ್ನ ಯೋಚನೆಗಳ ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಸಭಾಂಗಣದಲ್ಲಿ ತುಂಬಿದ್ದ ನಗುವಿನ ಮಧ್ಯೆ ಹೇಳಿದರು.

- ಸಂವಾದ ಕಾರ್ಯಕ್ರಮದಲ್ಲಿ ದೃಷ್ಟಿ ಸಾಮರ್ಥ್ಯವಿಲ್ಲದ ವಿದ್ಯಾರ್ಥಿನಿಯು ಭಾಗವಹಿಸಿದ್ದು ವಿಶೇಷವಾಗಿತ್ತು. " ನಿಮ್ಮ ಬಾಲ್ಯದಲ್ಲಿ ನೀವೆಂದಾದರೂ ಭಾರತದ ಪ್ರಧಾನಿಯಾಗುವ ಕನಸನ್ನು ಕಂಡಿದ್ದೀರಾ..?' ಎಂಬ ಪ್ರಶ್ನೆಯನ್ನು ಈ ಬಾಲಕಿ ಮೋದಿಯವರಿಗೆ ಕೇಳಿದಳು.

- ಚಿಣ್ಣರ ಮನದಲ್ಲಿರುವ ಹಲವು ಸಂದೇಹಗಳಿಗೆ ಪ್ರಧಾನಿ ಅವರು ಶಾಂತ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ.

- ಸಂಕ್ಷಿಪ್ತ ಭಾಷಣದಲ್ಲಿ ಶಿಕ್ಷಕರು-ಶಿಕ್ಷಣ ಪದ್ಧತಿ ಹಾಗೂ ವಿದ್ಯಾರ್ಥಿ ಕನಸುಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಮೋದಿ ಇದೀಗ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ.

- ನಮ್ಮ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದ ಆರಂಭದಲ್ಲಿ ತಿಳಿಸಿದರು.

- ತಮ್ಮ ಎಂದಿನ ಗಂಭೀರ ನಿಲುವಿನಲ್ಲಿಯೇ ಮೃದು ಮಾತಿನಲ್ಲಿ ತಮ್ಮ ಮಾತನ್ನು ಆರಂಭಿಸಿದ ನರೇಂದ್ರ ಮೋದಿ ಅವರು ಓರ್ವ ಶಿಕ್ಷಕನ ರೀತಿಯಲ್ಲಿ ತಮ್ಮ ಮಾತನ್ನು ಪ್ರಸ್ತುತಪಡಿಸಿದರು.

- ಮಾತ್ರವಲ್ಲದೆ ದೇಶದ ವಿವಿಧೆಡೆಗಳಲ್ಲಿ ಅಂತರ್ಜಾಲ ನೇರಪ್ರಸಾರದ ಮೂಲಕ ಇಂಟರ್ನೆಟ್‌ ಸೌಲಭ್ಯ ಲಭ್ಯವಿರುವ ಶಾಲೆಗಳಲ್ಲಿಯೂ ಸಹ ಪ್ರಧಾನಿಯವರ ಭಾಷಣದ ನೆರಪ್ರಸಾರವನ್ನು ವೀಕ್ಷಿಸುವ ಅವಕಾಶ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಭ್ಯವಾಗಲಿದೆ.

- ಬಳಿಕ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿ ಪ್ರಧಾನಮಂತ್ರಿಯವರ ಕೈಯಿಂದ ಪುಸ್ತಕದ ಕೊಡುಗೆಯನ್ನು ನೀಡಲಾಯಿತು.

- ರಾಧಾಕೃಷ್ಣನ್‌ ಅವರ ಕುರಿತಾಗಿ ಮಾತನಾಡಿದ ಓರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾಜೀ ರಾಷ್ಟ್ರಪತಿಯವರ ಜೀವನದ ಕೆಲ ಘಟನೆಗಳನ್ನು ಸ್ಮರಿಸಿಕೊಂಡರು.

- ಕಾರ್ಯಕ್ರಮದ ಆರಂಭದಲ್ಲಿ ಮೂವರ ವಿದ್ಯಾರ್ಥಿಗಳಿಗೆ ಮಾಜೀ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಕುರಿತಾಗಿ ಮಾತನಾಡುವ ಅವಕಾಶ ನೀಡಲಾಗಿತ್ತು.

- ನವದೆಹಲಿಯ ಮಾಣಿಕ್‌ ಶಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪ್ರಧಾನಿಯವರ ಭಾಷಣವನ್ನು ಪ್ರತ್ಯಕ್ಷವಾಗಿ ಆಲಿಸುವ ಅವಕಾಶನ್ನು ಪಡೆದಿದ್ದಾರೆ.ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಮಹತ್ತರ ಸ್ಥಾನವಿದೆ. ದಾರಿ ತೋರಿದ, ತಿದ್ದಿದ ಗುರುವನ್ನು ಸ್ಮರಿಸುವ ದಿನ 'ಶಿಕ್ಷಕರ ದಿನ'. ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನೇ ಭಾರತದಲ್ಲಿ 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತಿದೆ. ಸೆ.5ರ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವ ಇರಾದೆ ಹೊಂದಿದ್ದಾರೆ. ಮೋದಿ ಭಾಷಣ ಕಾರ್ಯಕ್ರಮದ ವೈಶಿಷ್ಯಗಳು, ಶಿಕ್ಷಕರ ದಿನಾಚರಣೆಯ ಮಹತ್ವ, ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ. ಶಿಕ್ಷಕರ ದಿನಾಚರಣೆಯ ಮಹತ್ವವೇನು? ಭಾರತದ ಪ್ರಥಮ ಉಪರಾಷ್ಟ್ರಪತಿಯಾಗಿದ್ದ ಖ್ಯಾತ ತತ್ವಶಾಸ್ತ್ರಜ್ಞ, ರಾಜನೀತಿ ತಜ್ಞ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರು ಸ್ವತಃ ಹಲವು ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು, ಅವರ ಪಾತ್ರ ಸಮಾಜದಲ್ಲಿ ಮಹತ್ತರವಾದದ್ದು ಎಂದು ಅವರು ಹೇಳುತ್ತಲೇ ಇದ್ದರು. ಶಿಕ್ಷಕರಾಗಿಯೂ ಅವರು ಅಪಾರ ಶಿಷ್ಯ ಸಮುದಾಯವನ್ನು ಹೊಂದಿದ್ದರು. 1962ರಲ್ಲಿ ಅವರು ರಾಷ್ಟ್ರಪತಿಗಳಾದಾಗ, ಅವರ ಜನ್ಮದಿನಾಚರಣೆಯಲ್ಲಿ ಮಾಡಲು ಶಿಷ್ಯರು ಮತ್ತು ಸ್ನೇಹಿತರು ನಿರ್ಧರಿಸಿದ್ದರು. ಈ ಬಗ್ಗೆ ಅವರಲ್ಲಿ ಹೇಳಿದಾಗ, ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದ, ರಾಧಾಕೃಷ್ಣನ್‌ ಅವರು, ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಬೇಡ. ಹಾಗೊಂದು ವೇಳೆ ಆಚರಿಸುತ್ತಿದ್ದರೆ, ಅದನ್ನು 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಬೇಕು ಎಂದು ಹೇಳಿದರು. ಆ ಬಳಿಕ ಸೆ.5ರಂದು ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಅಧಿಕೃತ ಘೋಷಣೆ ಹೊರಡಿಸಿದೆ. ಅಲ್ಲದೇ ಯುನೆಸ್ಕೋ ಕೂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು ಯುನೆಸ್ಕೋ ಸದಸ್ಯ ರಾಷ್ಟ್ರಗಳಲ್ಲಿಯೂ ಶಿಕ್ಷಕರ ದಿನಾಚರಣೆಯನ್ನು ಸೆ.5ರಂದೇ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳನ್ನುದ್ದೇಶಿಸಿ ಮೋದಿ ಭಾಷಣ
ಶಿಕ್ಷಕರ ದಿನಾಚರಣೆಯಂದು ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವುದು/ಸಂವಾದ ನಡೆಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಇರಾದೆ. ಸುಮಾರು 1 ಸಾವಿರ ವಿದ್ಯಾರ್ಥಿಗಳೊಂದಿಗೆ ದೆಹಲಿಯಲ್ಲಿ ಮೋದಿ ಸಂವಾದ ನಡೆಸಲಿದ್ದಾರೆ. ಅಲ್ಲದೇ ಭಾಷಣವನ್ನೂ ಮಾಡಲಿದ್ದಾರೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಪ್ರಧಾನಿ ಭಾಷಣವನ್ನು ಮಕ್ಕಳಿಗೆ ತಲುಪಿಸುವಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಸೆ.5ರಂದು 2.30ರಿಂದ ಸಂಜೆ 4.45ರವರೆಗೆ ದೂರದರ್ಶನ ಸೇರಿದಂತೆ ವಿವಿಧ ಅಂತರ್ಜಾಲ ತಾಣಗಳು, ರೇಡಿಯೋದಲ್ಲಿ ಭಾಷಣ, ಸಂವಾದ ಪ್ರಸಾರವಾಗಲಿದೆ.



No comments:

Post a Comment

 
Blogger Templates