school activity calander

x

Sunday, 7 September 2014

ಅಧ್ಯಾಪಕ ದಿನದ ಪ್ರಯುಕ್ತ ಅಧ್ಯಾಪಕರ ಸೂಚನೆ

ಸರಕಾರ ಮತ್ತು ಶಿಕ್ಷಣ ಇಲಾಖೆ ಶಿಕ್ಷಕರನ್ನು ಜನಗಣತಿ ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ ಮಾಡಬೇಕು.

ಶಿಕ್ಷಕರು ಈಗಾಗಲೇ ಸಮಸ್ಯೆಯ ಸುಳಿಯಲ್ಲಿದ್ದಾರೆ. ಸರಕಾರದ ಯಾವುದೇ ಯೋಜನೆಯ ಕರ್ತವ್ಯ ಆದೇಶ ಬಂದರೂ ಅದು ನೇರವಾಗಿ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ. ಇಲೆಕ್ಷನ್‌ ಡ್ನೂಟಿ, ಮತಗಟ್ಟೆ ಡ್ನೂಟಿ, ಮತದಾನದ ಡ್ನೂಟಿ, ಜನಗಣತಿ ಡ್ನೂಟಿ ಹೀಗೆ ಹತ್ತು ಹಲವಾರು ಯೋಜನೆಗಳ "ಡ್ನೂಟಿ'. ಈಗ ಜಾತಿಗಣತಿ. ಇದನ್ನೂ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ ಹಾಕುವ ತಯಾರಿ ನಡೆದಿದೆ.
ಎಲ್ಲ "ಡ್ನೂಟಿ'ಗಳಿಗೂ ಇವರೇ ಬಲಿಪಶುಗಳು. ಹೀಗೆ ಮಾಡಿದರೆ ಶಿಕ್ಷಣದ ಗತಿ ಎತ್ತ ಸಾಗೀತು? ಈಗಾಗಲೇ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಅತಿ ವಿರಳ. ಇನ್ನು ಈ "ಡ್ನೂಟಿ'ಗಳಿಂದ ಶಾಲೆಯಲ್ಲಿ ಶಿಕ್ಷಕರೇ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಪಾಠ, ಪ್ರವಚನ ಮಾಡಲು ಸಾಧ್ಯವಾಗುವುದಿಲ್ಲ. 
ಶಾಲೆಗಳಲ್ಲಿ ಹೆತ್ತವರು, ಶಾಲಾಭಿವೃದ್ಧಿ ಸಮಿತಿಯವರಿಂದ ಶಿಕ್ಷಕರು ಯಾವಾಗ ನೋಡಿದರೂ ರಜೆ ಅನ್ನುವ ಮಾತು ಕೇಳಿಬರುತ್ತಿದೆ. ಯಾರಿಗೂ ಶಿಕ್ಷಕರ ಈ ಕಷ್ಟ ಅರ್ಥವಾಗುವುದಿಲ್ಲ. ಸರಕಾರ, ಶಿಕ್ಷಣಾಧಿಕಾರಿಗಳು ಇಂತಹ ಕೆಲಸ ಕಾರ್ಯ ಗಳನ್ನು ಇತರ ಇಲಾಖೆಗಳ ನೌಕರರಿಗೂ ವಹಿಸುವುದಿಲ್ಲವೇಕೆ? ಅಥವಾ ವಿವಿಧ ಪದವೀಧರ ನಿರುದ್ಯೋಗಿಗಳಿಗೆ ಈ ಹೊಣೆ ಯನ್ನು ವಹಿಸಿ ಸಂಭಾವನೆ ನೀಡಿದರೆ ಅವರಿಗೂ ಜೀವನಾವಕಾಶ ಕಲ್ಪಿಸಿದಂತೆ ಆಗುವುದಿಲ್ಲವೇ? 
ಸರಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಇದರ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ಈ ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ ಮಾಡಬೇಕು.

No comments:

Post a Comment

 
Blogger Templates