school activity calander

x

Sunday, 14 September 2014

Highschool Physics Question pool Kannada




ಹಳ್ಳಿಯ ಮಕ್ಕಳು ಗಣಿತ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ಹೆಚ್ಚು ಬುದ್ಧಿವಂತರು. ಜೀವವಿಜ್ಞಾನದಂಥ ಇತರ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು.ಮಾತೃಭಾಷೆಯಲ್ಲಿ ಮಕ್ಕಳಿಗೆ ಪಠ್ಯ ಬೋಧನೆ ಮಾಡಿ ಹೆಚ್ಚು ವಿಷಯ ಅರ್ಥೈಸಬೇಕು. ಅದರ ಮೂಲಕ ಹಳ್ಳಿ ಮಕ್ಕಳು ಕೀಳರಿಮೆ ಬಿಟ್ಟು  ನಿರ್ದಿಷ್ಟ ಗುರಿ ಸಾಧನೆ ಮಾಡಲು ಅಧ್ಯಾಪಕರ ಮಾರ್ಗನಿರ್ದೇಶನ ಅಗತ್ಯ. 

 
ಮಕ್ಕಳು ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಯಾವತ್ತಿಗೂ ಈ ರೂಢಿ ಬಿಡಬಾರದು. ಮೊಬೈಲ್‌ ಅಬ್ಬರದ ಈ ಯುಗ ತಾಂತ್ರಿಕ ಕ್ಷೇತ್ರದ ಸಂಶೋಧನೆ ಕೊಡುಗೆ. ಅವುಗಳನ್ನು ಜ್ಞಾನ, ಮಾಹಿತಿಗಾಗಿ, ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ಈಚೆಗೆ ಶಾಲಾ ಮಟ್ಟದಲ್ಲಿ ‘ಕಂಠಪಾಠ’ ಮಾಡುವುದು, ಮಾಡಿಸುವುದು ಹೆಚ್ಚು ಅಂಕಗಳಿಕೆ ಮಾರ್ಗ ಎಂಬಂಥ ವಾತಾರಣ ಸೃಷ್ಟಿಯಾಗಿದೆ. ಮತ್ತೊಂದೆಡೆ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಅಂತರ್ಜಾಲದ ಮಾಹಿತಿ ತುಣುಕುಗಳನ್ನೇ ಪ್ರಿಂಟ್ ತೆಗೆದು ಬೈಂಡ್ ಮಾಡಿಸಿ ಕೈಪಿಡಿಯಾಗಿ ಕೊಡುವ ಪರಿಪಾಠ ಬೆಳೆದಿದೆ. ಇದರಿಂದ ಜ್ಞಾನ ವಿಸ್ತಾರ, ಅಧ್ಯಯನಕ್ಕೆ ಹೆಚ್ಚಿನ ಸಹಕಾರಿಯಾಗಲಾರದು ಎಂದು ತಿಳಿದು ತರಗತಿ ಚಟುವಟಿಕೆಯಲ್ಲಿ  ನಾವು ನಮ್ಮ ಮಕ್ಕಳಿಗಾಗಿ ಬಳಸುತ್ತಿದೇವೆ.ಇದನ್ನು ನಮ್ಮ ಕಾಸರಗೋಡು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗಾಗಿ ನಮ್ಮ ಮಿತ್ರರಾದ ನೀವು ಬಳಸುವಿರಿ ಎಂಬ ವಿಶ್ವಾಸ ನಮಗಿದೆ.

No comments:

Post a Comment

 
Blogger Templates