school activity calander

x

Sunday, 7 September 2014

ಪ್ರಧಾನ ಮಂತ್ರಿ ಕಾರ್ಯಕ್ರಮ - ಮಕ್ಕಳ ಹಾಗೂ ಅಧ್ಯಾಪಕರ ಪ್ರತಿಕ್ರಿಯೆ

ತಾವೂ ಪಾಲ್ಗೊಂಡಂತೆ ಭಾಸ: ತೆರೆಯಲ್ಲಿ ಮೋದಿ ಅವರು ಕೇಳಿದ ಪ್ರಶ್ನೆಗೆ ಇಲ್ಲೇ ಕೂತು ಮೋದಿ ಅವರಿಗೆ ತಿಳಿಸುವಂತೆ ಉತ್ತರಿಸುತ್ತಿದ್ದ ಮಕ್ಕಳು, ಮೋದಿ ಅವರು ಬಾಲ್ಯದ ಚೇಷ್ಟೆ, ತಂಟಾಟಗಳನ್ನು ಹೇಳುತ್ತಿದ್ದರೆ ಸಂವಾದ ವೀಕ್ಷಿಸುತ್ತಿದ್ದ ಮಕ್ಕಳು ನಕ್ಕು ಆನಂದಿಸುತ್ತಿದ್ದ ದೃಶ್ಯ ಕಂಡು ಬಂದಿತು. ದಿನಕ್ಕೆ ಮೂರು ಬಾರಿ ದೇಹ ದಂಡಿಸಬೇಕು, ಕೇವಲ ಪುಸ್ತಕದಲ್ಲಿವುದು ಕಲಿತರೆ ಸಾಲದು ಕೌಶಲ್ಯವನ್ನೂ ಕಲಿಯಬೇಕು ಎಂಬ ಗಂಭೀರ ವಿಷಯಗಳನ್ನು ಪ್ರಧಾನಿ ಚರ್ಚಿಸುವಾಗ ಮಕ್ಕಳಲ್ಲೂ ಗಾಂಭೀರ್ಯತೆ. ಸಂವಾದದಲ್ಲಿ ತಾವೂ ಪಾಲ್ಗೊಂಡಿದ್ದೇವೆ ಏನೋ ಎಂಬ ಮಕ್ಕಳಲ್ಲಿ ಕಂಡು ಬಂತು.

ಹಿಂದಿ ಸಮಸ್ಯೆ: ಪ್ರಧಾನಿ ಅವರ ಭಾಷಣ ಹಿಂದಿಯಲ್ಲಿದ್ದದ್ದಿರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ ಹಿಂದಿ ಅರ್ಥವಾಗದ ಮಕ್ಕಳು ಅಕ್ಕಪಕ್ಕದ ಮಕ್ಕಳೊಂದಿಗೆ ಮಾತಿಗಿಳಿಯುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಆಗ ಶಿಕ್ಷಕರು ಸೈಲೆನ್ಸ್‌ ಪ್ಲೀಸ್‌ ಎನ್ನುತ್ತಿದ್ದರು.

ಪ್ರಧಾನಿ ಅವರು ಇದೇ ಮೊದಲ ಬಾರಿಗೆ ಶಿಕ್ಷಕರಿಗೆ ಪಾಠ ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ. ಭಾಷಣ ತೋರಿಸುವುದು ಕಡ್ಡವಾಯವಲ್ಲದಿದ್ದರೂ ನಾವು ಪ್ರಧಾನಿಗೆ ಗೌರವ ನೀಡುವ ಉದ್ದೇಶದಿಂದ ಮಕ್ಕಳಿಗೆ ಎಲ್‌ಸಿಡಿ ಮೂಲಕ ತೋರಿಸಿದ್ದೇವೆ.
 ಮುಖ್ಯೋಪಧ್ಯಾಯ,
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ದಿನದಿಂದಲೇ ನಮ್ಮ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಭಿವೃದ್ಧಿಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪಾತ್ರ ಏನು ಎಂಬುವುದನ್ನು ತಿಳಿಸಿಕೊಟ್ಟಿರುವುದು ಖುಷಿ ತಂದಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿಕ್ಷಕರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ಮಕ್ಕಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ರಾಜ್ಯ ಸರಕಾರದ ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್‌ ಪ್ರಸಾರ ಮಾಡದಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿನ ಬಹುತೇಕ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳನ್ನುದ್ದೇಶಿಸಿ ಮಾಡಿದ ಭಾಷಣವನ್ನು ಇತರೆ ವಾಹಿನಿಗಳಲ್ಲಿ ವೀಕ್ಷಿಸಿದ್ದಾರೆ.

ಮೋದಿ ಅವರ ಭಾಷಣ ವೀಕ್ಷಣೆ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ ಎಂದು ಕೇರಳ ಸರಕಾರ ಆರಂಭದಲ್ಲಿಯೇ ಸ್ಪಷ್ಟಪಡಿಸಿತ್ತಾದರೂ ಬಹುತೇಕ ಖಾಸಗಿ ಶಾಲೆಗಳು ಪ್ರಧಾನಿ ಅವರ ಭಾಷಣದ ವೀಕ್ಷಣೆಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದವು.

ಸರಕಾರದ ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್‌ನಲ್ಲಿ ಮೋದಿ ಅವರ ಭಾಷಣ ನೇರಪ್ರಸಾರಗೊಳ್ಳದಿರುವ ಬಗೆಗೆ ಸರಕಾರದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಮೋದಿ ಅವರ ಭಾಷಣವನ್ನು ಪ್ರಸಾರ ಮಡಲು ಚಾನೆಲ್‌ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತಾದರೂ ಕೊನೇ ಕ್ಷಣದಲ್ಲಿ ಹಿರಿಯ ಅಧಿಕಾರಿಗಳಿಂದ ಬಂದ ಆದೇಶದ ಹಿನ್ನೆಲೆಯಲ್ಲಿ ಪ್ರಧಾನಿಯವರ ಭಾಷಣವನ್ನು ಪ್ರಸಾರ ಮಾಡದಿರಲು ತೀರ್ಮಾನಿಸಲಾಯಿತು ಎಂದು ಚಾನೆಲ್‌ನ್ನು ನಿರ್ವಹಿಸುತ್ತಿರುವ ಐಟಿ ಎಟ್‌ ಸ್ಕೂಲ್‌ ನ ಮೂಲಗಳು ತಿಳಿಸಿವೆ.

ಸಂಸ್ಥೆಯ ಈ ನಿರ್ಧಾರದಿಂದಾಗಿ ಸರಕಾರಿ ಶಾಲೆಗಳು ಮೋದಿ ಅವರ ಭಾಷಣದ ವೀಕ್ಷಣೆಯ ಅವಕಾಶದಿಂದ ವಂಚಿತರಾದರು. 

No comments:

Post a Comment

 
Blogger Templates