school activity calander

x

Saturday, 27 September 2014

ಮಂಗಳಯಾನ ವಿಜಯೋತ್ಸವ

25-09-2014 ರಂದು ಶಾಲಾವಠಾರದಲ್ಲಿ ಮಂಗಳಯಾನದ ವಿಜಯೋತ್ಸವವನ್ನು ಮಕ್ಕಳ ನೇತೃತ್ವದಲ್ಲಿ ಆಚರಿಸಲಾಯಿತು.
ಆ ಸಂಭ್ರಮವನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯವಾಗುತ್ತಿತ್ತು. ಗೆಲುವಿನ ಕೇಕೆ, ನಗುವಿನ ಅಲೆ ನಿದ್ದೆಯಿಲ್ಲದೆ ಕಳೆದ ರಾತ್ರಿಯ ಆತಂಕವನ್ನು ದೂರ ಮಾಡಿತ್ತು. ವಿಜ್ಞಾನಿಗಳು, ಸಹಾಯಕರು, ಸೇರಿದಂತೆ ಸಿಬ್ಬಂದಿಗಳಿಗೆ ಮಕ್ಕಳು ಅಭಿನಂದಿಸಿದರು.

ಮಾಸ್‌ ಅರ್ಬಿಟರ್‌ ಮಿಷನ್‌ ಮಂಗಳನ ಕಕ್ಷೆ ಸೇರುತ್ತಿದ್ದಂತೆ ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರದಲ್ಲಿ ಬುಧವಾರ ಕಂಡುಬಂದ ವಾತಾವರಣ.ಇಷ್ಟೊಂದು ಸಂಭ್ರಮಕ್ಕೆ ಮಂಗಳಯಾನ ಯಶಸ್ವಿಯಾಗಿದ್ದರ ಜತೆಗೆ ಮೊದಲ ಪ್ರಯತ್ನವೇ ಯಶಸ್ಸು ತಂದುಕೊಟ್ಟು ಹೊಸ ಚರಿತ್ರೆ ನಿರ್ಮಾಣವಾಗಿದ್ದು ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಮತ್ತು ಮಂಗಳಕ್ಕೆ ಮಾಮ್‌ (MOM) ಸಿಕ್ಕಿದಂತಾಗಿದೆ ಎಂಬ ಅವರ ಮಾತು ಈ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು ಎಂಬ ವಿಚಾರವನ್ನು ಮಕ್ಕಳು ಅದರ powerpoint presentation ಮತ್ತು video clipping ನ ಸಹಾಯದಿಂದ ತಿಳಿದುಕೊಂಡರು

ಮಾರ್ಸ್‌ ಆರ್ಬಿಟರ್‌ ಮಿಷನ್‌ನ (ಮಾಮ್‌) ಬರ್ನಿಂಗ್‌ ಕಾರ್ಯ ಪೂರ್ಣಗೊಂಡು ಮಾಮ್‌ ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಸಂದೇಶ ಬಂದ ಕೂಡಲೇ ವಿಜ್ಞಾನಿಗಳು, ಸಿಬ್ಬಂದಿ ಚಪ್ಪಾಳೆ ತಟ್ಟುತ್ತಾ ಎದ್ದುನಿಂತರು. ಪರಸ್ಪರ ಅಭಿನಂದಿಸಿಕೊಂಡರು. ಅವರ ಈ ಸಂಭ್ರಮ ನಾವು ಮಾನವ ಉದ್ಯಮ ಕ್ಷೇತ್ರವನ್ನು ಮೀರಿ ದೂರಕ್ಕೆ ತಲುಪಿದ್ದೇವೆ. ಹೊಸ ನಾವೀನ್ಯತೆ ಸಾಧಿಸಿದ್ದೇವೆ ಎಂಬ ಪ್ರಧಾನಿ ಮೋದಿಯವರ ಮಾತುಗಳಲ್ಲಿ ಕಾಣಿಸಿಕೊಂಡಿತು.

ನಿದ್ದೆಯಿಲ್ಲದ ರಾತ್ರಿ: ಇಸ್ರೋ ವಿಜ್ಞಾನಿಗಳ ಪಾಲಿಗೆ ಮಂಗಳವಾರ ನಿದ್ದೆಯಿಲ್ಲದ ರಾತ್ರಿಯಾಗಿತ್ತು. ಸುಮಾರು 300 ದಿನ ನಿದ್ರಾವಸ್ಥೆಯಲ್ಲಿದ್ದಮಾಮ್‌ನ 440 ನ್ಯೂಟನ್‌ ಲಿಕ್ವಿಡ್‌ ಅಪೋಜಿ ಮೋಟರ್‌ (ಎಲ್‌ಎಎಂ) ಎಂಜಿನ್‌ ಚಾಲನೆ ಮತ್ತು ನಾಲ್ಕನೇ ಬಾರಿ ಮಂಗಳಯಾನ ನೌಕೆಯ ಪಥ ಸರಿಪಡಿಸುವ ಕಾರ್ಯ ಸೋಮವಾರ ಯಶಸ್ವಿಯಾಗಿತ್ತು. ಉಳಿದಿದ್ದು ಮಾಮ್‌ ಅನ್ನು ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿಸುವ ಕೆಲಸ ಮಾತ್ರ. ಇದು ಸ್ವಲ್ಪ ಏರುಪೇರಾದರೂ ಮಂಗಳಯಾನ ದುಸ್ತರವಾಗಿತ್ತು. ಇಡೀ ಯಾನ ಪೂರ್ಣಗೊಳ್ಳುವ ಹಂತದಲ್ಲಿ ವಿಫ‌ಲವಾಗುತ್ತಿತ್ತು. ಹೀಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಸಿಬ್ಬಂದಿ ಆತಂಕದಿಂದಲೇ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದರು.

'ಇದು ಯಶಸ್ಸಿನ ಕೊನೆಯ ಮೆಟ್ಟಿಲಾಗಿತ್ತು. ಕೊನೇ ಹಂತದವರೆಗೆ ಬಂದವರಿಗೆ ಕೊನೆಯ ಮೆಟ್ಟಿಲೇರುವುದು ಕಷ್ಟವೇನೂ ಅಲ್ಲ ಎಂದುಕೊಂಡರೂ ಮನಸ್ಸು ಮಾತ್ರ ಆತಂಕದಿಂದ ಹೊರಬರುತ್ತಿರಲಿಲ್ಲ. ಜತೆಗೆ ಪ್ರಧಾನಿ ಬೇರೆ ನಮ್ಮ ಜತೆಗಿರುತ್ತಾರೆ. ಹೀಗಿರುವಾಗ ನಿದ್ರೆ ಬರುವುದಾದರೂ ಹೇಗೆ?' ಎಂದು ಮಂಗಳಯಾನ ಯಶಸ್ಸಿನ ನಂತರ ವಿಜ್ಞಾನಿಗಳು, ಸಿಬ್ಬಂದಿ ತಮ್ಮ ನಿದ್ದೆಯಿಲ್ಲದ ರಾತ್ರಿಯ ಬಗ್ಗೆ ಹೇಳುತ್ತಿದ್ದರು.

ಇಸ್ರೋ ಜತೆಗೆ ಪ್ರಧಾನಿಗೂ ಜೈಕಾರ: ಮಾಮ್‌ ಮಂಗಳನ ಕಕ್ಷೆ ಸೇರಿದ ಖುಷಿಯನ್ನು ಇಸ್ರೋ ಪರ ಘೋಷಣೆಗಳೊಂದಿಗೆ ವ್ಯಕ್ತಪಡಿಸಿದ ಕಿರಿಯ ವಿಜ್ಞಾನಿಗಳು ಮತ್ತು ಸಿಬ್ಬಂದಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪರವೂ ಘೋಷಣೆ ಕೂಗುತ್ತಿದ್ದರು. ಇಸ್ರೋಗೆ ಜೈ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ ಎನ್ನುತ್ತಿದ್ದರು.

ನಮ್ಮ ಶ್ರಮಕ್ಕೆ ಸಿಕ್ಕ ಗೆಲುವಿನ ಜತೆಗೆ ಈ ಶ್ರಮ ಗುರುತಿಸಿ ಅಭಿನಂದಿಸಿದ ಪ್ರಧಾನಿಯವರು ನಾವು ಮತ್ತಷ್ಟು ಕೆಲಸ ಮಾಡುವಂತೆ ಪ್ರೋತ್ಸಾಹಕ ಮಾತುಗಳನ್ನು ಹೇಳಿದ್ದಾರೆ. ಅವರ ಮಾತುಗಳು ಮನಸ್ಸಿನ ಆಳದಿಂದ ಬಂದಂತವು. ನಮ್ಮಂತ ಕಿರಿಯ ವಿಜ್ಞಾನಿಗಳಿಗೆ ಸ್ಪೂರ್ತಿದಾಯಕವಾಗಿದ್ದವು. ಹೀಗಾಗಿ ನಮ್ಮ ಸಂಶೋಧನೆಗೆ ಪ್ರೋತ್ಸಾಹಿಸುತ್ತಿರುವ ಇಸ್ರೋ ಜತೆಗೆ ನಮ್ಮನ್ನು ಹುರಿದುಂಬಿಸುತ್ತಿರುವ ಪ್ರಧಾನಿಯವರಿಗೂ ಜೈಕಾರ ಕೂಗುತ್ತಿದ್ದೇವೆ ಎಂದು ಕಿರಿಯ ವಿಜ್ಞಾನಿಗಳು ತಮ್ಮ ಜಯಘೋಷವನ್ನು ಸಮರ್ಥಿಸಿಕೊಂಡರು.

No comments:

Post a Comment

 
Blogger Templates