school activity calander

x

Wednesday, 24 September 2014

ಮಂಗಳಯಾನ ಮಿಷನ್‌ ಯಶಸ್ವಿ power point presentation for students-Kannada

ಇಸ್ರೋ ವಿಜ್ಞಾನಿಗಳು, ದೇಶವಾಸಿಗಳು ಮತ್ತು ವಿಶ್ವವೆಲ್ಲಾ ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಸರಿಸುಮಾರು 9 ತಿಂಗಳ ಹಿಂದೆ ಸ್ವದೇಶಿ ನಿರ್ಮಿತ ಪಿಎಸ್‌ಎಲ್‌ವಿ -ಎಕ್ಸ್‌ಎಲ್‌ ಉಡ್ಡಯನ ನೌಕೆಯಿಂದ ಹಾರಿಬಿಟ್ಟಿದ್ದ "ಮಾರ್ಸ್‌ ಆರ್ಬಿಟರ್‌' ಮಂಗಳಯಾನ ನೌಕೆ ಬುಧವಾರ 8 ಗಂಟೆಯ ಸುಮಾರಿಗೆ ಯಶಸ್ವಿಯಾಗಿ ಮಂಗಳನ ಕಕ್ಷೆಗೆ ಸೇರ್ಪಡೆಯಾಗಿದೆ. ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಗೊಂಡ ಹಿನ್ನಲೆ ಇಸ್ರೋಗೆ ಬುಧವಾರ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಅಮೆರಿಕದ ‘ನಾಸಾ’ವರೆಗೆ ಎಲ್ಲರೂ ‘ಇಸ್ರೋ’ ಸಾಧನೆಯನ್ನು ಕೊಂಡಾಡಿದ್ದಾರೆ.ಈ ಬಗ್ಗೆ ಮಕ್ಕಳಿಗೆ ಮಾಹಿಗಿ ನೀಡಲು ಸಹಾಯಕವಾಗುವ power point presentation ನಮ್ಮ ಎಸ್ ಆರ್ ಜಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗಾಗಿ ತಯಾರಿಸಿದೆ. ಇದು ನಿಮಗೂ ಪ್ರಯೋಜನ ವಾಗಬಹುದು ಎಂಬ ನಿರೀಕ್ಷ ನಮ್ಮದು.

2 comments:

  1. This comment has been removed by the author.

    ReplyDelete
  2. The power point presentation contains some helpful suggestions : it will help not only to students but to many teachers so that they can speak about the "voyage" in the class and also by showing the presentation in multimedia room- rameshwara bhat HM.,ghss padre

    ReplyDelete

 
Blogger Templates