school activity calander

x

Friday, 3 October 2014

X Maths kannada Questionpool_chapterV


ಗಣಕೀಕರಣಕ್ಕೆ ಮಕ್ಕಳ ಸಾಮರ್ಥ್ಯ ವನ್ನು ಬೆಳೆಸುವುದೇ ಗಣಿತ ಶಿಕ್ಷಣದ ಮುಖ್ಯ ಗುರಿ. ಗಣಿತ ಶಿಕ್ಷಣದ ವಿಚಾರಗಳ ಸ್ಪಷ್ಟತೆ ಮತ್ತು ತಾರ್ಕಿಕ ನಿರ್ಣಯಗಳನ್ನು ಪ್ರಸ್ತುತ ಪಡಿಸುವುದು. ವಿಚಾರ ಮಾಡಲು ಹಲವು ಮಾರ್ಗಗಳು ಮತ್ತು ವಿಧಗಳು ಇದ್ದು ಮತ್ತು ಅಮೂರ್ತವಾದವುಗಳನ್ನು ನಿರ್ವಹಿಸುವಂತೆ ಮಗುವಿನ ಸಂಪನ್ಮೂಲ ಜ್ಞಾನವನ್ನು ಬೆಳೆಸುವುದು ಅದರ ಉನ್ನತ ಗುರಿ.


ಗಣಿತ ಪಠ್ಯಕ್ರಮಕ್ಕೆ ಶಿಕ್ಷಣ ದ ಸಾರ್ವತ್ರಿಕರಣದಲ್ಲಿ ಹೆಚ್ಚಿನ ಮಹತ್ವವಿದೆ. ಗಣಿತ ಕಡ್ಡಾಯ ವಿಷಯವಾಗಿರುವುದರಿಂದ ಗುಣಮಟ್ಟದ ಕಲಿಕೆ ಪ್ರತಿಯೊಂದು ಮಗುವಿನ ಹಕ್ಕಾಗಿದೆ.

  • ಮಕ್ಕಳು ಗಣಿತಕ್ಕೆ ಹೆದರುವ ಬದಲು ಆನಂದಿ ಸುವಂತಾಗಬೇಕು.
  • ಮಕ್ಕಳು ಗಣಿತವನ್ನು ಸಂತೋಷದಿಂದ ಅನುಭವಿಸುವಂತಾಗಬೇಕು.
    ನಮ್ಮ ದೃಷ್ಟಿಯಲ್ಲಿ ಶಾಲೆಯಲ್ಲಿ ಗಣಿತ ಕಲಿಕಾ ಸನ್ನಿವೇಶ ಈಕೆಳಗಿನಂತಿರಬೇಕು.
  • ಮಕ್ಕಳ ಗಣಿತ ಕಲಿಕೆ ಸಂತೋಷಯಕವಾಗಿರಬೇಕು.
  • ಮಕ್ಕಳು ನಿತ್ಯ ಜೀವನಕ್ಕೆ ಅಗತ್ಯವಾದ ವ್ಯಾವಹಾರಿಕ ಗಣಿತವನ್ನು ಕಲಿಯಬೇಕು.
  • ಗಣಿತಕಲಿಕೆಯು ಮಗುವಿನ ನಿತ್ಯಜೀವನದ ಅನುಭವಗಳೊಂದಿಗೆ ನಡೆಯಬೇಕು.
  • ಮಕ್ಕಳು ಅರ್ಥಪೂರ್ಣ ಸಮಸ್ಯೆಗಳನ್ನು ಪರಿಹರಿಸುವಂತಿರಬೇಕು.
  • ಮಕ್ಕಳು ಅಮೂರ್ತ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ತರ್ಕ ಬಧ್ಧವಾಗಿ ಚಿಂತಿಸಲು ಸಮರ್ಥರಾಗಬೇಕು.
  • ಗಣಿತದ ಮೂಲ ರಚನೆಯನ್ನು ಗ್ರಹಿಸುವಮತಿರಬೇಕು.
ಈ ನಿಟ್ಟಿನಲ್ಲಿ ಈ ಪ್ಶಶ್ನಾ ಸಂಗ್ರಹವು ಮಕ್ಕಳಿಗೆ ಸಹಾಯಕವಾಗ ಬಹುದೆಂಬ ವಿಶ್ವಾಸ.

No comments:

Post a Comment

 
Blogger Templates