ಕಲಿಯುವ
ಮಗುವಿನ ಅಪೇಕ್ಷೆ,
ಅಗತ್ಯ,
ಸಾಮರ್ಥ್ಯ
ಇವುಗಳನ್ನು ಅಥವಾ ಆ ಮಗುವಿನ
ಪೋಷಕರು ಏನನ್ನು ಬಯಸುತ್ತಾರೆ
ಎಂಬುದನ್ನು ಗಮನಿಸಿ ನಮ್ಮ ತರಗತಿ
ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ
ಮಟ್ಟದಲ್ಲಿ ಬೋರ್ಡ್ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ,
ಹೆಚ್ಚಿನ
ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ
ಮುಖ್ಯ ಗುರಿಯಾಗಿರುತ್ತದೆ.
ಈ ಹಂತದಲ್ಲಿ ಅವರು ಕೇವಲ ಒಂದೆ ವಿಷಯಕ್ಕೆ ಸೀಮಿತವಾಗಿರದೆ ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಹಲವಾರು ವಿಷಯಗಳನ್ನು ಜೊತೆ ಜೊತೆಯಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಮಕ್ಕಳು ಮಾಹಿತಿಗಳನ್ನು ಹಾಗೂ ವಿಷಯಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳನ್ನು ಅಚ್ಚಳಿಯದೇ ನೆನಪಿಟ್ಟುಕೊಳ್ಳುವ ವಿಧಾನಗಳನ್ನು ಮತ್ತು ಗರಿಷ್ಠ ಅಂಕ ಪಡೆಯಬಹುದಾದ ಸುಲಭವಾದ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಆದ್ದರಿಂದ ಈ ಹಂತದಲ್ಲಿ ಸರಳ ತಂತ್ರಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ನೆರವಾಗುವುದು ನಮ್ಮ ಕರ್ತವ್ಯ. ಹೀಗಾಗಿ ಅಂತಿಮ ಪರೀಕ್ಷೆಯಲ್ಲಿನ ಮೌಲ್ಯ ಮಾಪನ ಹೇಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವುದು ಉತ್ತಮ.ಈ ನಗಟ್ಟಿನಲ್ಲಿ ನಿಮಗಾಗಿ ಒಂದು ಪ್ರಶ್ನೆ ಪತ್ರಿಕೆ
Please click here
No comments:
Post a Comment