ವಿಜ್ಞಾನ ವಿಷಯದಲ್ಲಿ
ಜಗತ್ತಿನಲ್ಲಿ ಪ್ರತಿ ಕ್ಷಣ ಅನೇಕ ಆವಿಷ್ಕಾರಗಳು ನಡೆಯುತ್ತಿವೆ. ಈ ಕ್ಷಣದಲ್ಲಿ ನಡೆಯುವ
ಆವಿಷ್ಕಾರ ಮುಂದಿನ ಕ್ಷಣಕ್ಕೆ ಮತ್ತೊಂದು ಆವಿಷ್ಕಾರವಾಗುತ್ತದೆ. ಪಠ್ಯಕ್ರಮದಲ್ಲಿ
ವಿಜ್ಞಾನದ ವಿಷಯವನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಸಂದರ್ಭಕ್ಕೆ ಬದಲಾ ಗಲಿದ್ದು,
ಕಾಲ ಕಾಲಕ್ಕೆ ಬದಲಾವಣೆಯನ್ನು ಗ್ರಹಿಸುವ, ಸಂದರ್ಭಕ್ಕೆ ತಕ್ಕಂತೆ ಅಭ್ಯಾಸ ಮಾಡುವ
ಕುತೂಹಲ ವಿದ್ಯಾರ್ಥಿಗಳ ದ್ದಾಗಬೇಕು.ಮಕ್ಕಳ ಸರ್ವತೋಮುಖ ಅಭಿವದ್ಧಿಗೆ
ವಿಜ್ಞಾನ ಮತ್ತು ತಂತ್ರ ಜ್ಞಾನದ ಕೊಡುಗೆ ಅಪಾರ. ತಂತ್ರಜ್ಞಾನದ ಬಳಕೆಯಿಂದ ಜಾಗತಿಕ
ವಾಗಿ ನಾವು ಜನರನ್ನು ತಲುಪುತ್ತಿದ್ದೇವ.
ಕಲಿಯುವ
ಮಗುವಿನ ಅಪೇಕ್ಷೆ,
ಅಗತ್ಯ,
ಸಾಮರ್ಥ್ಯ
ಇವುಗಳನ್ನು ಅಥವಾ ಆ ಮಗುವಿನ
ಪೋಷಕರು ಏನನ್ನು ಬಯಸುತ್ತಾರೆ
ಎಂಬುದನ್ನು ಗಮನಿಸಿ ನಮ್ಮ ತರಗತಿ
ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ
ಮಟ್ಟದಲ್ಲಿ ಬೋರ್ಡ್ ಪರೀಕ್ಷೆಗಳನ್ನು
ಯಶಸ್ವಿಯಾಗಿ ಎದುರಿಸಿ,
ಹೆಚ್ಚಿನ
ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ
ಮುಖ್ಯ ಗುರಿಯಾಗಿರುತ್ತದೆ.