ವಿದ್ಯಾರ್ಥಿಗಳು
ಪರೀಕ್ಷೆಯಲ್ಲಿ ಯಶ ಸಾಧಿಸಲು
ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು.ಪ್ರೌಢ
ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ
ವಿದ್ಯಾರ್ಥಿಗಳು ಪರೀಕ್ಷೆಗೆ
ಮಾನಸಿಕ, ದೈಹಿಕವಾಗಿ
ಸಿದ್ಧರಾಗಬೇಕು.
ಪ್ರಶಾಂತ
ವಾತಾವರಣವು ಓದಿಗೆ ಪುಷ್ಠಿ
ನೀಡುವುದು. ಕಷ್ಟ
ಪಟ್ಟು ಓದುವುದಕ್ಕಿಂತ ಇಷ್ಟಪಟ್ಟು
ಓದುವುದು ಸೂಕ್ತ .ಟಿಪ್ಪಣಿ
ಮಾಡಿಕೊಂಡು ಓದಿದ ಪ್ರಶ್ನೆಗಳಿಗೆ
ಉತ್ತರ ಬರೆಯುವ ಕೌಶಲ್ಯರೂಢಿಸಿಕೊಳ್ಳಬೇಕು.
ಪರೀಕ್ಷಾ ಸಮಯದಲ್ಲಿ
ಊಟೋಪಚಾರದ ಬಗ್ಗೆ ಬಹಳ ಕಾಳಜಿ
ವಹಿಸಬೇಕು.ಲಘು
ವ್ಯಾಯಾಮ ಆರೋಗ್ಯಕರ ಚಿಂತನೆಗಳು
ನಿಮ್ಮ ಲವಲವಿಕೆಯನ್ನು
ದ್ವಿಗುಣಗೊಳಿಸುವವು.ಪರೀಕ್ಷೆ
ಎದುರಿಸುವುದು ಕೇವಲ ತರಗತಿಯಿಂದ
ತರಗತಿಗೆ ಪಾಸಾಗಲು ಅಲ್ಲ.
ಬದುಕಿನಲ್ಲಿ ಬರುವ
ದಿನ ನಿತ್ಯದ ಸಮಸ್ಯೆ ಎದುರಿಸಲು.ಸಮಸ್ಯೆ
ಎದುರಿಸಲು ದೃಢವಿಶ್ವಾಸ,
ಸಿದ್ಧತೆ, ಆರೋಗ್ಯ,
ನೆಮ್ಮದಿಗಳೇ ಯಶಸ್ಸಿನ
ಮೂಲಗಳಾಗಿವೆ. ಇತರೆಯವರಿಗೆ
ಹೋಲಿಸಿಕೊಂಡು ಮನಸ್ಸು ಕುಗ್ಗಿಸಿಕೊಂಡರೆ
ನಾವು ಏನನ್ನೂ ಸಾಸಲು ಸಾಧ್ಯವಿಲ್ಲ
.ಧನಾತ್ಮಕ ಚಿಂತನೆ
ವ್ಯಕ್ತಿಯಲ್ಲಿ ಛಲ ಬೆಳೆಸುವ
ಮೂಲಕ ಇತರರಿಗಿಂತ ವಿಭಿನ್ನವಾಗಿ
ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು
ತೋರಿಸುತ್ತದೆ. ಮನಸ್ಸಿನ
ಇಚ್ಛಾಶಕ್ತಿ, ದೂರದೃಷ್ಟಿ,
ಕಠಿಣ ಪರಿಶ್ರಮ,
ಜಗತ್ತಿಗೆ ಒಳ್ಳೆಯದು
ಮಾಡಬೇಕೆನ್ನುವ ಹಂಬಲ ದೃಢಗೊಂಡರೆ
ಎಂಥದೆ ಸವಾಲು ಬಂದರೂ ಅವುಗಳು
ತನ್ನಿಂದ ತಾನೇ ನಿವಾರಣೆಯಾಗುತ್ತವೆ.ವಿದ್ಯಾರ್ಥಿಗಳು
ಧನಾತ್ಮಕ ಚಿಂತನೆ ಬೆಳೆಸಿಕೊಳ್ಳುವ
ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.ತಿಳಿಮನಸ್ಸಿನಿಂದ, ತಾಳ್ಮೆಯಿಂದ ಪ್ರಯತ್ನಿಸಿರಿ
No comments:
Post a Comment